ಪಿರಿಯಡ್ಸ್ ರ‍್ಯಾಶಸ್‌ಗೆ ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ

ಮಹಿಳೆಯರಲ್ಲಿ ಹದಿಹರೆಯದ ವಯಸ್ಸಿನಲ್ಲಿ ಆರಂಭವಾದ ಈ ಋತುಚಕ್ರ ಸುಮಾರು 45 ರಿಂದ 50 ವರ್ಷದವರೆಗೂ ಮುಂದುವರಿಯುತ್ತದೆ. ಕೆಲವು ಮಹಿಳೆಯರಿಗೆ ಅತಿಯಾದ ರಕ್ತಸ್ರಾವ, ಮೂಡ್ ಬದಲಾವಣೆ, ಸುಸ್ತು, ವಾಕರಿಕೆ, ತಲೆನೋವು, ಹೊಟ್ಟೆ ನೋವು ಹೀಗೆ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದು ಋತು ಚಕ್ರದ ಸಮಯದಲ್ಲಿ ಉಂಟಾಗುವ ಸಮಸ್ಯೆ ಆದರೆ ಪೀರಿಯಡ್ಸ್ ಮುಗಿದ ನಂತರ ನಾಲ್ಕು ಅಥವಾ ಐದನೆಯ ದಿನ ಕಾಡುವ ಇನ್ನೊಂದು ಸಮಸ್ಯೆ ನಿಜಕ್ಕೂ ಅಪಾಯಕಾರಿ ಎನ್ನಬಹುದು.

ಋತುಚಕ್ರದ ಅವಧಿ ಮುಗಿದ ನಂತರ ಸಾಕಷ್ಟು ಹೆಣ್ಣುಮಕ್ಕಳಲ್ಲಿ ಪಿರಿಯಡ್ ರಾಶಸ್ ಉಂಟಾಗುತ್ತದೆ. ಪೀರಿಯಡ್ಸ್ ಸಮಯದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ನೂರಾರು ಸಮಸ್ಯೆಗಳು ಉಂಟಾಗಬಹುದು ಇದರ ನಂತರ ಕಾಡುವ ರಾಶಸ್ ಸಮಸ್ಯೆ ಇದಕ್ಕಿಂತಲೂ ದೊಡ್ಡದು ಎನ್ನಬಹುದು. ಪಿರಿಯಡ್ಸ್ ನಂತರದಲ್ಲಿ ಉಂಟಾಗುವ ರಾಶಸ್ ಗೆ ಕಾರಣವೇನು?

ಪಿರಿಯಡ್ ರಾಶಸ್ ಕಾರಣಗಳು ಪಿರಿಯಡ್ ರಾಶಸ್ ಉಂಟಾಗಲು ಮೊಟ್ಟಮೊದಲ ಕಾರಣ ಅಂದ್ರೆ ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪ್ಕಿನ್ ಗಳು. ನಿರಂತರವಾಗಿ ನಾಲ್ಕು ದಿನಗಳ ಕಾಲ ಪ್ಯಾಡ್ ಗಳನ್ನು ಬಳಸಿದ ನಂತರ ಯೋನಿ ಭಾಗದಲ್ಲಿ ಚರ್ಮ ಕೆಂಪಾಗುತ್ತದೆ. ಈ ಸಮಯದಲ್ಲಿ ತುರಿಕೆ, ಉಬ್ಬುವುದು, ದದ್ದುಗಳು, ಸಣ್ಣಪುಟ್ಟ ಮೊಡವೆ ಅಂತಹ ಗುಳ್ಳೆಗಳು ಏಳಬಹುದು. ಇದು ಪೀರಿಯಡ್ಸ್ ನೋವಿಗಿಂತಲೂ ಹೆಚ್ಚಿನ ಕಿರಿಕಿರಿ ಉಂಟು ಮಾಡುತ್ತಾರೆ. ಋತುಚಕ್ರದಲ್ಲಿ ಯೋನಿಯಿಂದ ಸ್ರವಿಸುವ ರಕ್ತ ಹಾಗೂ ಸ್ಯಾನಿಟರಿ ಪ್ಯಾಡ್ ನಲ್ಲಿ ಬಳಸಲಾಗುವ ರಾಸಾಯನಿಕ ವಸ್ತುಗಳು ಸಂಯೋಜನೆಗೊಂಡಾಗ ಚರ್ಮದಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು. ಯಾಕೆಂದರೆ ಪಿರಿಯಡ್ಸ್ ಸಮಯದಲ್ಲಿ ತ್ವಚೆ ಒದ್ದೆ ಆಗಿರುತ್ತದೆ.

ಆಗಾಗ ಸ್ವಚ್ಛಗೊಳಿಸಿಕೊಳ್ಳುವುದು, ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಹೆಚ್ಚು ಸಮಯದ ವರೆಗೆ ಬದಲಾಯಿಸದೆ ಹಾಗೆ ಇಟ್ಟುಕೊಳ್ಳುವುದು ಈ ಮೊದಲಾದ ಕಾರಣಗಳಿಂದ ಚರ್ಮದ ಮೇಲೆ ರಾಶಸ್ ಉಂಟಾಗುವ ಸಾಧ್ಯತೆಗಳು ಇವೆ. ಅಷ್ಟೇ ಅಲ್ಲದೆ ಪಿರಿಯಡ್ಸ್ ನಂತರ ಕೆಲವರು ತಕ್ಷಣ ವ್ಯಾಯಾಮ ಮಾಡುವುದು, ಜಾಗಿಂಗ್, ವಾಕಿಂಗ್ ಮೊದಲಾದವುಗಳನ್ನು ಮಾಡುತ್ತಾರೆ ಇಂತಹ

ಸಮಯದಲ್ಲಿ ಉಂಟಾಗುವ ಬೆವರಿನಿಂದಲೂ ಕೂಡ ಚರ್ಮದ ಮೇಲೆ ಸೋಂಕು ಕಾಣಿಸಿಕೊಳ್ಳುತ್ತದೆ. ಆದರೆ ಸಾಕಷ್ಟು ಜನ ಇದಕ್ಕೆ ಸರಿಯಾಗಿರುವ ಔಷಧವನ್ನು ಕೂಡ ತೆಗೆದುಕೊಳ್ಳುವುದಿಲ್ಲ. ಹಾಗೆ ನೀವೇನಾದರೂ ಪಿರಿಯಡ್ಸ್ ರಾಶಸ್ ಉಂಟಾಗಿರುವುದನ್ನು ಮರೆಮಾಚುತಿದ್ದರೆ, ಮನೆಯಲ್ಲಿ ಮದ್ದು ತಯಾರಿಸಿ ಈ ರಾಶಸ್ ಗೆ ಉಪಶಮನ ಕಂಡುಕೊಳ್ಳಬಹುದು. ಪೀರಿಯಡ್ಸ್ ರಾಶಸ್ ಉಂಟಾದಾಗ ಮನೆಯಲ್ಲಿ ಮಾಡಿಕೊಳ್ಳಬಹುದಾದ ಮದ್ದುಗಳು ಯಾವವು ನೋಡೋಣ.

ಬೇವು:
ಬೇವು ಕಹಿಯಾಗಿರಬಹುದು. ಆದರೆ ಅದರಲ್ಲಿ ಇರುವ ಔಷಧ ಗುಣಗಳು ಸಾಕಷ್ಟು. ಇದರಲ್ಲಿ ಇರುವ ಉತ್ಕರ್ಷಣ ನಿರೋಧಕ ಶಕ್ತಿ ಹಾಗೂ ಉರಿಯೂತದ ಗುಣಲಕ್ಷಣಗಳು ಚರ್ಮದ ಮೇಲೆ ಯಾವುದೇ ಸೋಂಕು ತಗುಲದಂತೆ ಕಾಪಾಡಬಲ್ಲವು. ಬೇವಿನಿಂದ ಮನೆ ಮುದ್ದು ತಯಾರಿಸಿಕೊಳ್ಳುವುದು ಹೇಗೆ? ಮೊದಲನೇದಾಗಿ ಸುಮಾರು 20ರಿಂದ 25 ಬೇವಿನ ಎಲೆಗಳನ್ನು ಅರ್ಧ ಲೀಟರ್ ನಷ್ಟು ನೀರಿಗೆ ಹಾಕಿ ಕುದಿಸಿ. ನಂತರ ಎಲೆಯನ್ನು ತೆಗೆದು ನೀರು ಸ್ವಲ್ಪ ಆರುವುದಕ್ಕೆ ಬಿಡಿ. ಬಳಿಕ ಈ ನೀರಿನಿಂದ ಸೋಂಕಿತ ಚರ್ಮದ ಭಾಗವನ್ನು ತೊಳೆಯಿರಿ ಅಥವಾ ಸ್ನಾನ ಮಾಡುವ ನೀರಿಗೆ ಈ ನೀರನ್ನು ಮಿಶ್ರಣ ಮಾಡಿ ಕೂಡ ಬಳಸಬಹುದು. ಐಸ್ ಪ್ಯಾಕ್: ಪೀರಿಯಡ್ಸ್ ನಂತರ ಉಂಟಾಗುವ ರಾಶಸ್ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ. ಕೆಲವೊಮ್ಮೆ ಸಿಕ್ಕಾಪಟ್ಟೆ ನೋವು ಹಾಗೂ ತುರಿಕೆ ಇರಬಹುದು. ಇಂತಹ ಸಂದರ್ಭದಲ್ಲಿ ತಕ್ಷಣಕ್ಕೆ ಉಪಶಮನಕಾರಿಯಾಗಿರುವ ವಸ್ತು ಎಂದರೆ ಐಸ್ ಪ್ಯಾಕ್. ಕೆಲವು ಐಸ್ ತುಂಡುಗಳನ್ನು ತೆಗೆದುಕೊಂಡು ಅದನ್ನು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಬಳಿಕ ಚರ್ಮದ ಮೇಲೆ ಎಲ್ಲಿ ನೋವು ಕಾಣಿಸಿಕೊಳ್ಳುತ್ತದೆಯೋ ಆ ಪ್ರದೇಶದಲ್ಲಿ ಇಟ್ಟು ಸ್ವಲ್ಪ ಮಸಾಜ್ ಮಾಡಿ. ಈರೀತಿ ಮಾಡಿದರೆ ರಾಶಸ್ ನೋವಿನಿಂದ ತಕ್ಷಣ ಪರಿಹಾರ ಸಿಗುತ್ತದೆ. ಜೊತೆಗೆ ದದ್ದುಗಳು ಜಾಸ್ತಿ ಆಗದಂತೆ ಕೂಡ ಇದು ತಡೆಯುತ್ತದೆ.

ತೆಂಗಿನ ಎಣ್ಣೆ:
ತೆಂಗಿನ ಎಣ್ಣೆಯಲ್ಲಿ ಇರುವ ಔಷಧಿ ಗುಣವನ್ನು ಈಗಾಗಲೇ ಸಾಕಷ್ಟು ಜನರಿಗೆ ತಿಳಿದಿರುತ್ತದೆ. ಇದು ಬಹಳ ಹಳೆಯ ಪದ್ಧತಿ. ಯಾವುದೇ ನೋವು ಅಥವಾ ಉರಿ ಚರ್ಮದ ಸೋಂಕು ಉಂಟಾದಾಗ ತೆಂಗಿನ ಎಣ್ಣೆ ಲೇಪನವನ್ನು ಮಾಡುತ್ತಿದ್ದರು. ಹಾಗಾಗಿ ಬ್ಯಾಕ್ಟೀರಿಯಾ ವಿರೋಧಿ ಗುಣ ಇರುವ ತೆಂಗಿನೆಣ್ಣೆಯನ್ನು ಕೂಡ ರಾಶಸ್ ಗೆ ಔಷಧಿಯಾಗಿ ಬಳಸಬಹುದು. ಇದು ನಿಮ್ಮ ತ್ವಚೆಯನ್ನು ತೇವಯುತಗೊಳಿಸುತ್ತದೆ ಆದರೆ ದದ್ದು ಅಥವಾ ತುರಿಕೆ ಚರ್ಮದಲ್ಲಿ ಉಂಟಾಗುವ ಕೆಂಪು ಗುಳ್ಳೆಗಳು ಎಲ್ಲವನ್ನು ಉಪಶಮನ ಮಾಡುತ್ತದೆ. ಮೊದಲಿಗೆ ಸೋಂಕು ಉಂಟಾಗಿರುವ ಸ್ಥಳವನ್ನು ಸ್ವಚ್ಛಗೊಳಿಸಿ ನಂತರ ತೆಂಗಿನ ಎಣ್ಣೆಯಲ್ಲಿ ಹತ್ತಿ ಬಟ್ಟೆ ಅಥವಾ ಹತ್ತಿ ಉಂಡೆಗಳನ್ನು ಅದ್ದಿ, ನಂತರ ಅದನ್ನು ಸೋಂಕು ಉಂಟಾಗಿರುವ ಸ್ಥಳಕ್ಕೆ ಹಚ್ಚಿ. ಹೀಗೆ ತೆಂಗಿನ ಎಣ್ಣೆಯನ್ನು ಲೇಪಿಸಿದ ನಂತರ ರಾತ್ರಿ ಇಡೀ ಹಾಗೆ ಬಿಡುವುದು ಒಳ್ಳೆಯದು.

ರಾತ್ರಿ ತುರಿಕೆ ಅಥವಾ ನೋವು ಕಾಣಿಸಿಕೊಳ್ಳುವುದಿಲ್ಲ. ಅಥವಾ ಬೆಳಿಗ್ಗೆ ಎದ್ದು ಸ್ನಾನವಾದ ನಂತರ ತೆಂಗಿನ ಎಣ್ಣೆಯನ್ನು ಸೋಂಕಿತ ಸ್ಥಳಕ್ಕೆ ಹಚ್ಚಿದರೂ ಕೂಡ ನಂತರ ಉಂಟಾಗುವ ರಾಶಸ್ ಗುಣಮುಖವಾಗುತ್ತದೆ. ಈ ರೀತಿಯಾಗಿ ಕೆಲವು ಮನೆಮದ್ದುಗಳು ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ನೋವು ಇದ್ದದ್ದು ಚರ್ಮದ ಸೋಂಕು ಎಲ್ಲವನ್ನು ತಡೆಗಟ್ಟಬಲ್ಲವು. ಇವುಗಳ ಜೊತೆಗೆ ನೀವು ಸಮಯದಲ್ಲಿ ಕೆಲವು ಪ್ರಮುಖ ಮುಂಜಾಗ್ರತಾ ಕ್ರಮಗಳನ್ನು ಕೂಡ ತೆಗೆದುಕೊಳ್ಳಬೇಕು.

• ನೀವು ಬಳಸುತ್ತಿರುವ ಸ್ಯಾನಿಟರಿ ಪ್ಯಾಡ್ ನಿಮ್ಮ ತ್ವಚೆಗೆ ಸರಿ ಹೊಂದುವುದಿಲ್ಲ ಎನಿಸಿದರೆ ತಕ್ಷಣವೇ ಬೇರೆ ಬ್ರಾಂಡ್ ಬಳಸಿ.

ಇನ್ನು ಸ್ಯಾನಿಟರಿ ಪ್ಯಾಡ್ ಬದಲು ಮೆನ್ಟ್ರುವಲ್ ಕಪ್ ಬಳಸುವುದು ಒಳ್ಳೆಯದು.

ರಾಸಾಯನಿಕ ಬಳಸಿದ ಪ್ಯಾಡ್ ಗಳು ನಿಮ್ಮ ತ್ವಚೆಗೆ ಸರಿ ಹೊಂದದೆ ಇದ್ದರೆ, ಈಗ ಸಿಗುವ ಅತಿ ಬಟ್ಟೆಗಳಿಂದ ತಯಾರಿಸಿದ ಪರಿಸರ ಸ್ನೇಹಿ ಪ್ಯಾಡ್ ನ್ನು ಬಳಸಬಹುದು.

ಇನ್ನು ಪಿರಿಯಡ್ಸ್ ಬಳಿಕ ಒದ್ದೆ ಬಟ್ಟೆಯನ್ನು ಬಳಸಬೇಡಿ. ನೀವು ಧರಿಸುವ ಒಳ ಉಡುಪು ಒದ್ದೆಯಾಗಿದ್ದರೆ ಯೋನಿ ಬಾಗದಲ್ಲಿ ಸೋಂಕು ಖಂಡಿತವಾಗಿಯೂ ಸಂಭವಿಸುತ್ತದೆ. ಹಾಗಾಗಿ ಸ್ವಲ್ಪವೂ ಬೆವರು ಅಥವಾ ತ್ವಚೆ ಒದ್ದೆಯಾಗದಂತೆ ನೋಡಿಕೊಳ್ಳಿ.

ತ್ವಚೆ ಶುಷ್ಕ ವಾಗಿದ್ದರೆ ಜೊತೆಗೆ ಸ್ವಚ್ಛವಾಗಿದ್ದರೆ ಯಾವುದೇ ಚರ್ಮದ ಸೋಂಕು ಕೂಡ ನಿಮ್ಮನ್ನು ಬಾಧಿಸುವುದಿಲ್ಲ. ಪೀರಿಯಡ್ಸ್ ರಾಶಸ್ ಉಂಟಾದಾಗ ಯಾವುದೇ ಕಾರಣಕ್ಕೂ ಬಿಗಿಯಾಗಿರುವ ಒಳ ಉಡುಪನ್ನು ಧರಿಸಬೇಡಿ. ಆದಷ್ಟು ಹತ್ತಿ ಬಟ್ಟೆಯಿಂದ ತಯಾರಿಸಿದ ಪ್ಯಾಂಟಿಗಳನ್ನು ಬಳಸಿದರೆ ಉತ್ತಮ. ಈ ರೀತಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪಿರಿಯಡ್ಸ್ ನಂತರ ಉಂಟಾಗುವ ರಾಶಸ್ ನಿಂದ ಮುಕ್ತಿ ಪಡೆಯಬಹುದು.